Advertisement

Buy a helmet at a discounted price instead of a wand

Buy a helmet at a discounted price instead of a wand 500 ರೂ ದಂಡ ಕಟ್ಟುವ ಬದಲು 1200 ರೂ ಬೆಲೆಬಾಳುವ ISI ಮಾರ್ಕಿನ ಹೆಲ್ಮೆಟ್ ಅನ್ನು 750 ರೂ ಗೆ ಖರೀದಿಸಿ (ಪೊಲೀಸ್ ಕ್ಯಾಂಟೀನಿನ ರಿಯಾಯಿತಿ ದರದಲ್ಲಿ) ಹೆಲ್ಮೆಟ್ ಧರಿಸಿ-ಹಣವನ್ನೂ ಉಳಿಸಿ-ಕಾನೂನನ್ನೂ ಗೌರವಿಸಿ-ಪ್ರಾಣವನ್ನೂ ಕಾಪಾಡಿಕೊಳ್ಳಿ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಹೆಚ್.ಡಿ.ಆನಂದ ಕುಮಾರ್, IPS ರವರು ವಿನೂತನ ಕಾರ್ಯಕ್ರಮವನ್ನು ಇಂದು ಜಿಲ್ಲಾ ಪೊಲೀಸ್ ಕಛೇರಿಯ ಮುಂದಿನ ಜೋಡಿರಸ್ತೆಯಲ್ಲಿ ನಡೆಸಿದರು. ಅಪಘಾತಗಳಿಂದ ಸಾವನ್ನಪ್ಪಿರುವ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸದೇ ಇರುವುದು ಹಚ್ಚಾಗಿ ಕಂಡುಬಂದಿದ್ದು, ಜಿಲ್ಲೆಯ ನಾಗರೀಕರ ಹಿತರಕ್ಷಣೆಯ ದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಮಾಡಿದ್ದು, ಎಲ್ಲಾ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲು ಸೂಚಿಸಿದರು. ಜೊತೆಗೆ ಪತ್ರಿಕಾಗೋಷ್ಟಿ ನಡೆಸಿ ಅಂಕಿ-ಅಂಶಗಳನ್ನು ನೀಡಿ, ಅಪಘಾತಗಳ ಕುರಿತು ತನಿಖೆಗಾಗಿ ತಂಡವನ್ನು ರಚಿಸಿದ್ದು, ಅಪಘಾತವೇನಾದರೂ ಕಳಪೆ ಗುಣಮಟ್ಟದ ರಸ್ತೆ-ಗುಂಡಿ ಯಿಂದೇನಾದರೂ ಸಂಭವಿಸಿದ್ದು ಕಂಡು ಬಂದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು, ಇಂಜಿನಿಯರುಗಳ ಮೇಲೆ ಎಫ್.ಐ.ಆರ್ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ರಸ್ತೆಯ ಮಧ್ಯೆದಲ್ಲಿ ವಾಹನ ಕಟ್ಟು ನಿಂತಲ್ಲಿ ಬೇರೆ ವಾಹನಗಳು ತಿಳಿಯದೇ ಢಿಕ್ಕಿಹೊಡೆಯದಂತೆ ಚಾಲಕರು ವಾಹನದ ಸುತ್ತ ಇತರೆ ಚಾಲಕರುಗಳ ಗಮನಕ್ಕೆ ಬರುವಂತೆ ರಿಫ್ಲೆಕ್ಟರ್ ಅಥವಾ ಅಡೆ-ತಡೆ ಇಡುವಂತೆಯೂ, ಸಾಧ್ಯವಿಲ್ಲದಿದ್ದಲ್ಲಿ ಕೂಡಲೇ ಕಂಟ್ರೋಲ್ ರೂಂಗೆ ಕರೆಮಾಡಿ ತಿಳಿಸಿದರೆ ವಾಹನದ ಸುತ್ತ ಬ್ಯಾರಿಕೇಡ್ ಹಾಕಿಸುವುದಾಗಿ ತಿಳಿಸಿರುತ್ತಾರೆ.

instead

Post a Comment

0 Comments